ಕೆಕೆಆರ್,ಡಿ,ಬಿ,ಅಭಿವೃದ್ದಿ 847ಕೊ,ಮಂಜೂರಿ, ಮೂರು ವರ್ಷದಲ್ಲಿ ಒಟ್ಟು 5300 ಕೊಟಿ ಕರ್ಚು.- ಮುಖ್ಯಮಂತ್ರಿ ಸಿದ್ರಾಮಯ್ಯ .

440 ಕೊಟಿ ಆರೋಗ್ಯ ಅವಿಷ್ಕಾರ ಯೋಜನೆಗೆ ಸಿ,ಎಮ್,ಸಿದ್ರಾಮಯ್ಯ ಚಾಲನೆ!!

ಶಹಾಪುರ.
ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ರಾಜ್ಯ ಸರ್ಕಾರ ಪ್ರತಿ ವರ್ಷ ೫೦೦೦ ಸಾವಿರ ಕೋಟಿ ನೀಡುತ್ತಿದ್ದು ಹಲವಾರು ಶೈಕ್ಷಣಿಕ ಆರೋಗ್ಯ ಮೂಲಭೂತ ಸೌಕರ್ಯಗಳಿಗೆ ವಿನಿÀಯೋಗ ಮಾಡಿಕೊಳ್ಳಲು ಸೂಚಿಸಿ ಇಂದು ಕೆಕೆಆರ್,ಡಿ,ಬಿ,ಯಿಂದ ಒಟ್ಟು 847 ಕೊಟಿ ಅಭಿವೃದ್ದಿ ಯೋಜನೆಗಳಿಗೆ ಸಂಪುಟ ಒಪ್ಪಿಗೆ ನೀಡಿ ಹಣ ಬಿಡುಗಡೆಗೊಳಿಸಲಾಗಿದೆ, ಅದರಂತೆ ಆರೋಗ್ಯ ಅವಿಷ್ಕಾರಕ್ಕಾಗಿ 440 ಕೊಟಿ ಕಾಮಗಾರಿಗೆ ಚಾಲನೆ ನೀಡಿದ್ದೇವೆ ಇಂದಿನವರೆಗೂ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ಮೂರು ವರ್ಷಗಳಲ್ಲಿ ೫೩೦೦ ಕೊಟಿ ಕರ್ಚಾಗಿದೆ ಎಂದು ಮುಖ್ಯಮಂತ್ರಿ ಸಿದ್ರಾಮಯ್ಯನವರು ತಿಳಿಸಿದರು, ಅವರು ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಆರೋಗ್ಯ ಅವಿಷ್ಕಾರ ೪೪೦ ಕೊಟಿರೂ, ಕಾಮಗಾರಿಗಳಿಗೆ ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿದರು, ಮುಂದುವರೆದು ಮಾತನಾಡಿದ ಅವರು,೨೦೧೨ರಲ್ಲಿ ಹಿಂದಿಳಿದ ಪ್ರದೇಶಕ್ಕಾಗಿ ಡಾ, ಮಲ್ಲಿಕಾರ್ಜುನ ಖರ್ಗೆಜೀ ಮತ್ತು ದಿವಂಗತ ದರ್ಮಸಿಂಗ್ ಜೀಯವರು ಅವಿರತ ಪರಿಶ್ರಮಗಳಿಂದ ಸಂವಿಧಾನದ,೩೭೧ /ಜೆ ತಿದ್ದುಪಡಿಮಾಡಿ ಅಂದಿನ ಕೇಂದ್ರ ಸರ್ಕಾರದ ಜಾರಿಗೊಳಿಸಿತು, ಆದರೆ ೨೦೧೩ರಲ್ಲಿ ರಾಜ್ಯದಲ್ಲಿಅಧಿಕಾರಕ್ಕೆ ಬಂದ ನನ್ನ ಅಂದರೆ ಸಿದ್ರಾಮಯ್ಯನವರ ನೇತೃತ್ವದ ಸರ್ಕಾರ ಸಂಪೂರ್ಣ ಜಾರಿಗೊಳಿಸಿ ಕೆಕೆಆರ್,ಡಿ,ಬಿ,ಗೆ ಕಳೆದ ೨೦೨೩/೨೪ರಲ್ಲಿ ೩೦೦೦ ಸಾವಿರ ಕೋಟಿ, ೨೦೨೪/೨೪/ರಲ್ಲಿ ೫೦೦೦ ಸಾವಿರ ಕೊಟಿ ಅನುಧಾನ ಹೆಚ್ಚು ನೀಡಿ ಈ ಭಾಗದ ಅಭಿವೃದ್ದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಬದ್ದವಾಗಿದೆ ಎಂದು ಮುಖ್ಯಮಂತ್ರಿ ಸಿದ್ರಾಮಯ್ಯನವರು ತಿಳಿಸಿದರು, ಕೆಕೆ ಆಆರ್,ಡಿ,ಬಿ, ಮೇಲೆ ಯಾವುದೆ ಆರೋಪಗಳನ್ನು ಬಾರದಂತೆ ಇಂದು ಡಾ, ಅಜೆಯಸಿಂಗ್ ರವರು ಕಾರ್ಯರೂಪಗೊಳಿಸುತ್ತಿದ್ದಾರೆ, ಈ ಭಾಗದಲ್ಲಿ ತಾಲುಕಾ, ಮತ್ತು ಪ್ರಾಥಮಿಕ ಸಮುದಾಯ ಆಸ್ಪತ್ರೆಗಳನ್ನು ಮೇಲ್ದರ್ಜೆಗೆರಿಸಿ ಇಂದು ಪ್ರತಿ ತಾಲುಕಾ ಜಿಲ್ಲಾ ಮಟ್ಟದಲ್ಲಿ ಎಮ್,ಆರ್,ಐ, ತಪಾಷಣೆ ಯಂತ್ರಗಳನ್ನು ಸಹ ಮಾಡಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ತಾಯಿಂದಿರ ಸಾವು ಮಕ್ಕಳ ಸಾವು ಹೆಚ್ಚಾಗುತ್ತಿದೆ, ಬಡ ಜನರು ಯಾವುದೆ ಖಾಸಗಿ ಆಸ್ಪತ್ರೆಗೆ ದುಬಾರಿ ವೆಚ್ಚ ಮಾಡದಿರಲಿ ಎಂದು ಕೆಕೆಆರ್,ಡಿ,ಬಿ,ಯಿಂದ ಆರೋಗ್ಯ ಅವಿಷ್ಕಾರ ಹಮ್ಮಿಕೊಳ್ಳಲಾಗುದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು,ಇನ್ನೂ ಪ್ರಾದೇಶಿಕ ಅಸಮತೋಲನಾ ಹೋಗಲಾಡಿಸಲು ಗೋವಿಂದ್ರಾಜ ವರದಿ ಜಾರಿಗೆ ಬರಲ್ಲಿದೆ ಎಂದ ಅವರು, ನುಡಿದಂತೆ ನಡೆದಿದ್ದೇವೆ, ಎಂದರು, ಸ್ವತಂತ್ರö್ಯ ಹೋರಾಟಗಾರ ಕೊಲೂರ ಮಲ್ಲನವರ ಸ್ಮಾರಕ ಮತ್ತು ಬಸವಕಲ್ಯಾಣದಲ್ಲಿ ಬಸವಣ್ಣನವರ ಕಾರ್ಯಕ್ಷೇತ್ರದ ಪುನಶ್ಚೇತನ ಕಾಮಗಾರಿ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ .ಮುಖ್ಯಮಂತ್ರಿಗಳು ತಿಳಿಸಿದರು,
ಭಾಕ್ಸ್,
ಸುಳ್ಳಿನ ಬಿಜೆಪಿ ರಾಜ್ಯದ ಮತದಾರರನ್ನು ದಿಕ್ಕು ತಪ್ಪಿಸುತ್ತಿದೆ, ಇತ್ತಿಚೆಗೆ ನಡೆದ ಘಟನೆಯಲ್ಲಿ ೧೧ ಜನರು ಮೃತಪಟ್ಟರು, ಅದಕ್ಕೆ ಸಿದ್ರಾಮಯ್ಯನವರು ರಾಜಿನಾಮೆ ಕೊಡಬೇಕು ಎನ್ನುವ ಬಿಜೆಪಿ ನಾಯಕರು ತಮ್ಮ ಸರ್ಕಾರದಲ್ಲಿ ಕುಂಭಮೇಳದಲ್ಲಿ ೪೦ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು ಸರ್ಕಾರ ರಾಜೀನಾಮೆ ನೀಡಿದ್ದರೆ? ಎಂದು ಮುಖ್ಯಮಂತ್ರಿ ಸಿದ್ರಾಮಯ್ಯನವರು ಬಿಜೆಪಿ ಪಕ್ಷದ ನಾಯಕರಿಗೆ ತಿರುಗೇಟು ನೀಡಿದರು,ಕಾಂಗ್ರೆಸ್ ಸರ್ಕಾರದ ಭರವಸೆಯಲ್ಲಿ ಒಟ್ಟು ೧೬೫ ಗಳಲ್ಲಿ ೧೫೮ ಭರವಸೆಗಳು ಈಡೆರಿಸಿದ್ದೇವೆ, ಅಂದು ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ ೩೭೧ ಜೆ ಸೆರ್ಪಡೆಗೆ ಕೇಂದ್ರ ಸರ್ಕಾರಕ್ಕೆ ಪತ್ರ ಬರದಿದ್ದ ಮುಖ್ಯಮಂತ್ರಿ ಎಸ್,ಎಮ್,ಕೃಷ್ಣರವರಿಗೆ ಅಂದಿನ ಉಪ ಪ್ರಧಾನಿ ಎಲ್,ಕೆ, ಅಡ್ವಾಣಿಯವರು ೩೭೧ ಜೆ, ತಿದ್ದಪಡಿ ಮಾಡುವದಿಲ್ವೆಂದು ಮರಳಿ ಪತ್ರ ಬರೆದಿದ್ದರು, ಅದು ನನ್ನ ಹತ್ತಿರ ಇದೆ ಎಂದ ಮುಖ್ಯಮಂತ್ರಿಗಳು ಬಿಜೆಪಿ ಸರ್ಕಾರದ ೬೦೦ ಭರವಸೆಗಳಲ್ಲಿ ಒಂದೂ ಈಡೇರಿಕೆಯಾಗಲಿಲ್ಲ, ಬೇಲೆ ಏರಿಕೆ ಮಾಡಿದ್ದು ಬಿಜೆಪಿ ಸರ್ಕಾರ ಅಂದು ಕೇವಲ ೨೫ ಸಾವಿರ ರೂ,ಗಳಿಗೆ ತೊಲೆ ಇದ್ದ ಬಂಗಾರ ಬೇಲೆ ಇಂದು ೧ ಲಕ್ಷಕ್ಕೇರಿಸಿದ್ದಾರೆ, ರಾಷ್ಟçದಲ್ಲಿ ಜಿಎಸ್,ಟಿ, ಜಮಾದಲ್ಲಿ ದ್ವೀತಿಯ ಸ್ಥಾನದಲ್ಲಿದ್ದೇವೆ,ಎಂದು ಸಿ,ಎಮ್, ಸಿದ್ರಾಮಯ್ಯನವರು ರಾಜ್ಯದ ಅಭಿವೃದ್ದಿಗೆ ಕಾಂಗ್ರೆಸ್ ಸರ್ಕಾರ ಬದ್ದವಾಗಿದೆ ಎಂದು ಅವರು ತಿಳಿಸಿದರು, ಎ,ಐ.ಸಿಸಿ ರಾಷ್ಟಿçÃಯ ಅಧ್ಯಕ್ಷರಾದ ಡಾ,ಮಲ್ಲಿಕಾರ್ಜುನ ಖರ್ಗೆಜೀಯವರು ಮಾತನಾಡಿದರು, ಅದರಂತೆ ಉಪ ಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಿ ದಿನೇಶ ಗುಂಡುರಾವ್, ಯಾದಗಿರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳಾದ ಶರಣಬಸ್ಸಪ್ಪಗೌಡ ದರ್ಶನಾಪುರ ಮಾತನಾಡಿದರು, ಕೆಕೆಆರ್,ಡಿ,ಬಿ,ಅಧ್ಯಕ್ಷರಾದ ಡಾ,ಅಜೆಯಸಿಂಗ್ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು, ವೇದಿಕೆಯಲ್ಲಿ ಸಚಿವರಾದ ಈಶ್ವರ ಖಂಡ್ರೆ, ಸಮಾಜ ಕಲ್ಯಾಣ ಮಂತ್ರಿಗಳಾದ ಡಾ,ಎಚ್,ಸಿ, ಮಾಹಾದೇವಪ್ಪ, ಸಚಿವರಾದ ಎನ್,ಎಸ್,ಬೋಸರಾಜ್, ಡಾ,ಶರಣಪ್ರಕಾಶ ಪಾಟೀಲ್, ಶಾಸಕರಾದ ಬಿ,ಆರ್,ಪಾಟೀಲ್. ಲೋಕಸಭೆ ಸದಸ್ಯರಾದ ರಾಧಾಕೃಷ್ಣ ದೊಡ್ಮನಿ,ತಿಪ್ಪಣಪ್ಪ ಕಮಕನೂರ, ಜಿ,ಕುಮಾರನಾಯಕ, ಆಗಮಿಸಿದ್ದರು, ಶಾಸಕರಾದ ಚೆನ್ನಾರಡ್ಡಿ ತುನೂರವರು ಅಧ್ಯಕ್ಷತೆ ವಹಿಸಿದ್ದರು,ಶಾಸಕರಾದ ವೇಣುಗೊಪಾಲನಾಯಕ, ಕೆಪಿಸಿಸಿ ಜಿಲ್ಲಾಧ್ಯಕ್ಷರಾದ ಬಸರಡ್ಡಿ ಪಾಟೀಲ್, ಸೇರಿದಂತೆ ಅನೇಕ ಶಾಸಕರು ಗಣ್ಯರು ಹಿರಿಯರು ಕಾಂಗ್ರೆಸ್ ದುರೀಣರು ಆಗಮಿಸಿದ್ದರು,

Leave a Reply

Your email address will not be published. Required fields are marked *

English Kannada